
ಉಗುರು,ಕೂದಲು ಮತ್ತು ಚರ್ಮ ಇವು ಮೂರೂ ಒಂದೇ ಜಾತಿಯವು.ಇವೆಲ್ಲವೂ ರಚನೆ ಆದದ್ದು "Keratin" ಅನ್ನುವ ಕಣದಿಂದ ಬಹುಶಃ ಅದಕ್ಕೆ ಇರಬೇಕು,ಇವೆಲ್ಲವೂ ಒಂದೇ ರೀತಿ ಕೆಲಸ ಮಾಡುತ್ತವೆ;ನಿರಂತರ ಬೆಳೆಯುತ್ತವೆ ಮತ್ತು ದೇಹದಿಂದ ದೂರವಾಗುತ್ತಲೇ ಇರುತ್ತವೆ.
ಉಗುರಿನ ಬಗ್ಗೆ ಇತರ ವಿವರಗಳನ್ನು ತಿಳಿದುಕೊಳ್ಳುವದು ಸಹ ಕೂತೂಹಲಕಾರಿಯೇ, ನಾವು ಬರಿಗಣ್ಣಿನಲ್ಲಿ ನೋಡಿದಾಗ ನಮ್ಮ ಉಗುರು ಮತ್ತು ಚರ್ಮ ಜೊತೆ ಸೇರುವ U ಆಕಾರದ ಜಾಗ ಉಗುರಿನ ಬುಡ ಅನಿಸುತ್ತದಲ್ಲವೇ ಅಲ್ಲಿಂದಲೇ ಉಗುರು ಬೆಳೆಯುತ್ತದೆ ಎಂದು ಅಂದುಕೊಂಡಿರುತ್ತೇವೆ,ಆದರೆ ನಿಜವಾದ ವಿಷಯ ಅದಲ್ಲ:ಉಗುರಿನ ಬುಡ ಇರುವದು ಇನ್ನು ಒಳಗೆ ಉಗುರು ಮತ್ತು ಚರ್ಮ ಜೊತೆ ಸೇರುವ ಜಾಗವನ್ನು Curticle ಎನ್ನುತ್ತಾರೆ.ಈ Curticle ನ ಒಳಗೆ ಉಗುರಿನ ಬುಡ ಇದೆ ಮತ್ತು ಅದು ಬರಿಗಣ್ಣಿಗೆ ಕಾಣಿಸುವದಿಲ್ಲ ಮತ್ತು ಉಗುರು ಬೆಳೆಯಲು ಪ್ರಾರಂಭವಾಗುವದು ಅಲ್ಲಿಂದಲೇ.
ಉಗುರಿನ ಬುಡದಲ್ಲಿ ಹೊಸ ಉಗುರಿನ ಕಣಗಳು ರಚನೆ ಆದಾಗ ಅದು ಹಳೆಯ ಉಗುರನ್ನು ಮೇಲು ಮುಖಕ್ಕೆ ನೂಕುತ್ತದೆ,ಮೇಲೆ ನೂಕಲ್ಪಟ್ಟ ಉಗುರಿನ ಕಣಗಳು ಸಪಾಟಾಗುತ್ತವೆ ಮತ್ತು ಗಟ್ಟಿಯಾಗುತ್ತದೆ.ಗಟ್ಟಿಯಾದ ಉಗುರು ನಿಧಾನವಾಗಿ ಹೊರ ಮುಖಕ್ಕೆ ಬರುತ್ತವೆ.ಈ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ.ಹೊಸ ಉಗುರಿನ ಕಣ ರಚನೆಯಾದಂತೆಲ್ಲ ಹಳೆಯ ಉಗುರಿನ ಕಣ ಮೇಲು ಮೇಲಕ್ಕೆ ನೂಕಲ್ಪಡುತ್ತಲೇ ಇರುತ್ತದೆ.ಉಗುರು ಯಾವಾಗಲೂ ಬೆಳೆಯುತ್ತಲೇ ಇರುವದು ಅದೇ ಕಾರಣಕ್ಕೆ.ಉಗುರಿನಲ್ಲಿ ರಕ್ತ ಕಣಗಳು ಇರುವುದಿಲ್ಲವಾದ್ದರಿಂದ ನಾವು ಉಗುರು ಕತ್ತರಿಸಿದಾಗ ನೋವು ಆಗುವುದಿಲ್ಲ.ಕತ್ತರಿಸಿದಷ್ಟು ಉಗುರು ಬೆಳೆಯುತ್ತಲೇ ಇರುತ್ತದೆ.ಹೀಗೆ ತಿಂಗಳಿಗೆ 2.5 ಮಿಲಿ ಮೀಟರಿನಷ್ಟು ಉಗುರು ಬೆಳೆಯುತ್ತದೆ.ಅಂದರೆ ಸುಮಾರು 5-6 ತಿಂಗಳಿಗೆ ಉಗುರು ಸಂಪೂರ್ಣವಾಗಿ ಬದಲಾಗುತ್ತದೆ.
ಹೊಸ ಉಗುರಿನ ಕಣಗಳು ಉಗುರಿನ ಬುಡದಲ್ಲಿ ನಿರಂತರವಾಗಿ ಉತ್ಪಾದನೆ ಆಗುತ್ತಲೇ ಇರುವದರಿಂದ ನಾವು ಕಟ್ ಮಾಡಿದರೂ ಉಗುರು ಖಾಲಿ ಆಗುವುದೇ ಇಲ್ಲ!

No comments:
Post a Comment