Monday, May 11, 2009

ಬಿಲ್ ಗೆಟ್ಸೂ...ಮತ್ತವನ ದುಡ್ಡೂ...!


ಸಧ್ಯ ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿರುವ,ಕಳೆದ ವರ್ಷ ಜಗತ್ತಿನ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿದ್ದ ಬಿಲ್ ಗೇಟ್ಸ್ ನಿಮಗೆ ಗೊತ್ತಲ್ಲ?
ಆತನ ಪ್ರತಿ ಸೆಕೆಂಡಿನ ದುಡಿಮೆ 250 U.S ಡಾಲರ್ಸ್ {ಅಂದಾಜು ಹನ್ನೆರಡೂವರೆ ಸಾವಿರ},ಅಂದರೆ ಒಂದು ದಿನಕ್ಕೆ 20 ಮಿಲಿಯನ್ ಡಾಲರ.ವರ್ಷಕ್ಕೆ 7.8 ಬಿಲಿಯನ್ ಡಾಲರ!
ಇಂಥ ಬಿಲ್ ಗೇಟ್ಸ್ ದುಡ್ಡು ಎಣಿಸುವಾಗಲೋ,ಜೇಬಿನಿಂದ ದುಡ್ಡು ತಗೆಯುವಾಗಲೋ ಕೈತಪ್ಪಿ ಸಾವಿರ ಡಾಲರ್ ನೋಟೊಂದು ಕೆಳಗೆ ಬಿತ್ತು ಎಂದುಕೊಳ್ಳಿ, ಆಗ ಗೇಟ್ಸ್ ಬಗ್ಗಿ ಅದನ್ನು ತಗೆದುಕೊಳ್ಳುವುದಿಲ್ಲ. ಏಕೆಂದರೆ , ಹಾಗೆ ಬಗ್ಗಿ ತಗೆದುಕೊಳ್ಳಲು ಕನಿಷ್ಠ ನಾಲ್ಕು ಸೆಕೆಂಡ್ ನಷ್ಟಾದರೂ ಸಮಯ ಬೇಕು. ನಾಲ್ಕು ಸೆಕೆಂಡಿನಲ್ಲಿ ಆತ ಅದನ್ನು ದುಡಿದುಕೊಂಡಿರುತ್ತಾನೆ!
ಅಮೇರಿಕಾ ದೇಶದ ಮೇಲೆ ಅಂದಾಜು 6 ಟ್ರಿಲಿಯನ್ ಸಾಲ ಇದೆ. ಒಂದು ವೇಳೆ ಒಬಾಮಾ ಸಾಲವನ್ನು ನೀನೆ ತೀರಿಸು ಎಂದು ಗೇಟ್ಸ್ ಗೆ ಹೇಳಿದರೆ - ಆತ ಒಪ್ಪಿಕೊಂಡರೆ ; ಹತ್ತೇ ವರ್ಷದಲ್ಲಿ ಇಡೀ ದೇಶದ ಸಾಲವನ್ನು ಒಬ್ಬನೇ ತೀರಿಸಿಬಿಡುತ್ತಾನೆ!
ಬಿಲ್ ಗೇಟ್ಸ್ ಬಳಿ ಇರುವ ದುಡ್ಡಿನ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ಭೂಮಿ ಮೇಲೆ ಬದುಕಿರುವ ಪ್ರತಿ ಮನುಷ್ಯನಿಗೂ ತಲಾ 15 ಡಾಲರ್ ದಾನ ಮಾಡಿದರೂ ಆತನಲ್ಲಿ ಇನ್ನೂ 5 ಮಿಲಿಯನ್ ಡಾಲರ್ ಉಳಿಯುತ್ತದೆ!
ಗೇಟ್ಸ್ ಒಬ್ಬ ವ್ಯಕ್ತಿಯಾಗಿರದೇ ಒಂದು ದೇಶವಾಗಿದ್ದರೆ: ದೇಶವನ್ನು ಸದ್ಯ ಭೂಖಂಡದಲ್ಲಿರುವ ಅಷ್ಟೂ ದೇಶಗಳಿಗೆ ಹೋಲಿಸಿದರೆ 37 ನೆ ಅತ್ಯಂತ ಶ್ರೀಮಂತ ದೇಶವಾಗಿರುತ್ತಿತ್ತು! ಹಾಗೆಯೇ ಗೇಟ್ಸ್ ಬಳಿಯಿರುವ ಅಷ್ಟೂ ದುಡ್ಡನ್ನು ಚಿಲ್ಲರೆ ಮಾಡಿಸಿ ಡಾಲರ್ ನೋಟುಗಳನ್ನಾಗಿಸಿದರೆ, ಭೂಮಿಯಿಂದ ಚಂದ್ರನಿಗೆ 14 ಸಲ ಹೋಗಿ ಬರುವಷ್ಟು ಉದ್ದದ ರಸ್ತೆಗೆ ನೋಟುಗಳನ್ನು ಹೊಂದಿಸಬಹುದಾಗಿದೆ!

No comments:

Post a Comment