
ಜವಾಹರಲಾಲ್ ನೆಹರೂ
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರೂ ಅಧಿಕಾರ ಸ್ವೀಕರಿಸಿದರು.
ಅವಧಿ,ಆಗಷ್ಟ್ ೧೫,೧೯೪೭ ರಿಂದ ಮೇ ೨೭,೧೯೬೪ ರವರೆಗೆ.
ಗುಲ್ಜಾರಿ ಲಾಲ್ ನಂದಾ
ನೆಹರೂ ನಿಧನಾನಂತರ ಮೇ ೨೭,೧೯೬೪ ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.ಅವಧಿ ಜೂನ್ ೯,೧೯೬೪ ರವರೆಗೆ.ನಂತರ ಲಾಲ್ ಬಹದ್ಧೂರ್ ಶಾಸ್ತ್ರೀ ಅವರು ನಿಧನರಾದ ಸಂದರ್ಭ ೧೯೬೬ ರ ಜನೆವರಿ ೧೧ ರಿಂದ ೨೪
ರವರೆಗೆ ಮತ್ತೆ ೧೪ ದಿನಗಳ ಕಾಲ ಪ್ರಧಾನಿಯಾಗಿದ್ದರು.ಲಾಲ್ ಬಹದ್ಧೂರ್ ಶಾಸ್ತ್ರೀ
೧೯೬೪ ರ ಜೂನ್ ೯ ರಿಂದ ೧೯೬೬ ರ ಜನೆವರಿ ೧೧ ರವರೆಗೆ ಪ್ರಧಾನಿಯಾಗಿ ಆಳ್ವಿಕೆ ನಡೆಸಿದರು.

ಇಂದಿರಾ ಗಾಂಧೀ
ಜನೆವರಿ ೨೪, ೧೯೬೬ ರಿಂದ ಮಾರ್ಚ್ ೨೪,೧೯೭೭ ರವರೆಗೆ ಮತ್ತು ಜನೆವರಿ ೧೪ ರಿಂದ ಅಕ್ಟೋಬರ್ ೩೧, ೧೯೮೪ ರವರೆಗೆ ಒಟ್ಟು ೫೮೩೧ ದಿನಗಳ ಕಾಲ ಪ್ರಧಾನಿಯಾಗಿ ಆಳ್ವಿಕೆ.

ಮೊರಾರ್ಜಿ ದೇಸಾಯಿ
ಪ್ರಥಮ ಕಾಂಗ್ರೆಸ್ಸೇತರ ಪ್ರಧಾನಿಯಾದ ದೇಸಾಯಿಯವರು ತಮ್ಮ ಜನತಾ ಪಕ್ಷ ಸರ್ಕಾರವನ್ನು ಮಾರ್ಚ್ ೨೪, ೧೯೭೭ ರಿಂದ ಜುಲೈ ೨೮, ೧೯೭೯ ರವರೆಗೆ ಮುನ್ನಡೆಸಿದರು.
ಚೌಧರಿ
ಚರಣ್ ಸಿಂಗ್ರೈತನಾಯಕ ಚರಣ ಸಿಂಗ್ ಜುಲೈ ೨೮, ೧೯೭೯ ರಂದು ಅಧಿಕಾರ ಸ್ವೀಕರಿಸಿದರು.ಜನೆವರಿ ೧೪, ೧೯೮೦ ರವರೆಗೆ ೧೭೧ ದಿನಗಳ ಕಾಲ ರಾಜೀವ್ ರಾಜೀವ್.

ರಾಜೀವ್ ಗಾಂಧೀ
ನೆಹರೂ ಮೊಮ್ಮಗ ರಾಜೀವ್ ತಮ್ಮ ೪೧ ನೆ ವಯಸ್ಸಿನಲ್ಲಿ ಅಂದರೆ ಅಕ್ಟೋಬರ್ ೩೧, ೧೯೮೪ ರಂದು {ತಮ್ಮ ತಾಯಿ ಇಂದಿರಾ ಹತ್ಯೆಯಾದ ದಿನವೇ} ಅಧಿಕಾರ ಸ್ವೀಕರಿಸಿದರು.ಡಿಸೆಂಬರ್ ೧, ೧೯೮೯ ರವರೆಗೆ ಆಡಳಿತ ನಡೆಸಿದರು.
ವಿ.ಪಿ.ಸಿಂ
ಗ್ಜನತಾದಳದ ಮುಖಂಡ ವಿಶ್ವನಾಥ ಪ್ರತಾಪ್ ಸಿಂಗ್ ಡಿಸೆಂಬರ್ ೨,೧೯೮೯ ರಂದು ಪ್ರಧಾನಿಯಾದರು.ನವೆಂಬರ್ ೧೦, ೧೯೯೦ ರವರೆಗೆ ೩೪೪ ದಿನಗಳ ಕಾಲ ಮುಂದುವರೆದರು.

ಚಂದ್ರಶೇಖರ್
ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ನವೆಂಬರ್ ೧೦, ೧೯೯೦ ರಿಂದ ೨೨೪ ದಿನಗಳು,ಅಂದರೆ ಜೂನ್ ೨೧, ೧೯೯೧ ರವರೆಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದರು.
ಪಿ.ವಿ.ನರ
ಸಿಂಹರಾವ್ಪ್ರಧಾನಿ ಪಟ್ಟ ಅಲಂಕರಿಸಿದ ದಕ್ಷಿಣ ಭಾರತದ ಪ್ರಥಮ ವ್ಯಕ್ತಿ.ಜೂನ್ ೨೧, ೧೯೯೧ ರಿಂದ ಮೇ ೧೦, ೧೯೯೬ ರವರೆಗೆ ಸಂಪೂರ್ಣ ಐದು ವರ್ಷಗಳ ಕಾಲ ಆಳ್ವಿಕೆ.

ಅಟಲ್ ಬಿಹಾರಿ ವಾಜಪೇಯಿ
ಭವ್ಯ ಭಾರತದ ಸಮರ್ಥ ನಾಯಕ ಅಟಲ್ ಬಿಹಾರಿ ವಾಜಪೇಯಿ ಮೇ ೧೬ ರಿಂದ ಜೂನ್ ೧,೧೯೯೬ ರವರೆಗೆ ಹಾಗೂ ನಂತರ ಎರಡನೇ ಬಾರಿಗೆ ಮಾರ್ಚ್ ೧೯, ೧೯೯೮ ರಂದು ಹಾಗೂ ಮೂರನೇ ಬಾರಿಗೆ ಅಕ್ಟೋಬರ್ ೧೩, ೧೯೯೯ ರಂದು ಅಧಿಕಾರ ಸ್ವೀಕಾರ.ಮೇ ೧೩, ೨೦೦೪ ರವರೆಗೆ ಪ್ರಧಾನಿಯಾಗಿ ಭಾರತವನ್ನು ಆಳಿದರು.
ಹೆಚ್.ಡಿ.
ದೇವೇಗೌಡ೧೧ ನೆ ಲೋಕಸಭೆಯ ನಾಯಕನಾಗಿ ಹರದನಹಳ್ಳಿ ದೊಡ್ದೆಗೌಡರ ಮಗ ದೇವೇಗೌಡ ಜೂನ್ ೧, ೧೯೯೬ ರಿಂದ ಎಪ್ರೀಲ್ ೨೧, ೧೯೯೭ ರವರೆಗೆ ಒಟ್ಟು ೧೧ ತಿಂಗಳ ಕಾಲ ಪ್ರಧಾನಿಯಾಗಿ ಆಳ್ವಿಕೆ ನಡೆಸಿದರು.ಭಾರತವನ್ನು ಆಳಿದ ಕರ್ನಾಟಕದ ಪ್ರಥಮ ವ್ಯಕ್ತಿ ದೇವೇಗೌಡ.ಆದರೂ ಕರ್ನಾ
ಟಕಕ್ಕೆ ನಯ್ಯಾಪೈಸೆ ಸಹಾಯ ಮಾಡಲಿಲ್ಲ ಎಂಬುದು ಬೇರೆ ಮಾತು.ಐ.ಕೆ.ಗುಜ್ರಾಲ್
ಎಪ್ರಿಲ್ ೨೧, ೧೯೯೭ ರಂದು ಪ್ರಧಾನಿಯಾಗಿ ಗುಜ್ರಾಲ್ ಅಧಿಕಾರ ಸ್ವೀಕಾರ.ನವೆಂಬರ್ ೨೮, ೧೯೯೭ ರಲ್ಲಿ ಪ್ರಧಾನಿ ಪದವಿಗೆ ರಾಜಿನಾಮೆ.
ಡಾ.ಮನ
ಮೋಹನ್ ಸಿಂಗ್ಮನಮೋಹನ್ ಸಿಂಗ್ ಮೇ ೨೨,೨೦೦೪ ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ,ಐದು ವರ್ಷ ಪೂರೈಸಿ ಈಗ ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಮುಂದುವರೆದಿದ್ದಾರೆ.










