ಕ್ರಾಸ್ ದಿ ಲೈನ್ !
ಇದು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಪ್ರಸಾರವಾಗುವ ಅತ್ಯಂತ ಹೇಯ ಕಾರ್ಯಕ್ರಮಗಳಲ್ಲಿ ಒಂದು. ಡಬ್ಲ್ಯೂ.ಡಬ್ಲ್ಯೂ.ಎಫ್ ನ ಇನ್ನೊಂದು ರೂಪ ಡಬ್ಲ್ಯೂ.ಡಬ್ಲ್ಯೂ.ಇ. ಅದರ ಪ್ರತಿರೂಪ ಟಿ.ಎನ್.ಎ. 'ಟೆನ್ ಸ್ಪೋರ್ಟ್ಸ್' - 'ಸ್ಟಾರ್ ಸ್ಪೋರ್ಟ್ಸ್' ಚಾನೆಲ್ ಗಳು ರಸ್ಟ್ಲಿಂಗ್ ಆಟದ ಹೆಸರಲ್ಲಿ ಇಂದು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮಗಳು ಇಡೀ ಸಮಾಜಕ್ಕೆ ಮಾರಕವಾಗಿವೆ
ದ್ವೇಷ,ಸೇಡು,ಸಿಟ್ಟು,ಹಿಂಸೆ,ರಕ್ತ....ಇವುಗಳೇ ಇಂದು ಡಬ್ಲ್ಯೂ.ಡಬ್ಲ್ಯೂ.ಇ - ಟಿ.ಎನ್.ಎ ದ ಬಂಡವಾಳ. ಮಾನಸಿಕವಾಗಿ ಹಾಗು ದೈಹಿಕವಾಗಿ ಮನುಷ್ಯರನ್ನು ಸದ್ರುಡವಾಗಿಸುವುದಕ್ಕೆ ಕ್ರೀಡೆ ಎನ್ನುತ್ತಾರೆ.ಆದರೆ ಸೇಡಿನ ದಾಳಿ ಮಾಡಿ ರಕ್ತ ಹರಿಸುವ ಇದ್ಯಾವ ಸೀಮೆಯ ಆಟ? ಇದರಿಂದ ಯಾರಿಗೆ ಏನು ಉಪಯೋಗವಾಗುತ್ತದೆ? ಮಕ್ಕಳು ಇದರಿಂದ ಕಲಿಯುವದಾದರು ಏನನ್ನು?
ಬೆಳಿಗ್ಗೆ ಏಳು ವರೆಗೆ,ಸಂಜೆ ನಾಲ್ಕು ವರೆಗೆ,ರಾತ್ರಿ ಒಂಭತ್ತು ವರೆಗೆ ಹೀಗೆ ದಿನದ ಮೂರೂ ಹೊತ್ತು ಅಲ್ಲದೆ,ಮದ್ಯ ಮದ್ಯ ಬಿಡುವು ಸಿಕ್ಕಾಗಲೆಲ್ಲ ಈ ರಕ್ತದಾಟವನ್ನು ಪ್ರಸಾರ ಮಾಡಲು ಇವೆರಡು ಛಾನಲ್ಗಳು ಪೈಪೋಟಿಗೆ ಇಳಿದಿವೆ,ರಸ್ಟ್ಲಿಂಗ ಕ್ರೀಡೆಯ ಹೆಸರಲ್ಲಿ ಬಕೆಟ್ ಗಟ್ಟಲೆ ರಕ್ತ ಹರಿಸುತ್ತವೆ.ರಕ್ತ ಹೆಚ್ಚು ಹರಿಸಿದಷ್ಟು ಟಿ.ಆರ್.ಪಿ.ಹೆಚ್ಚುತ್ತದೆ ಎಂಬುದು ಈ ಚಾನಲ್ ಗಳಿಗೆ ಕನ್ಫಾರ್ಮ್ ಆಗಿ ಬಿಟ್ಟಿದೆ. ಈ ಕಾರ್ಯಕ್ರಮಗಳನ್ನು ಮಕ್ಕಳಲ್ಲ,ದೊಡ್ಡವರು ನೋಡಿದರೂ ಮೂರ್ಛೆ ಹೋಗುವಂತಿರುತ್ತದೆ. ಮಹಿಳಾ ರಸ್ತ್ಲರ್ ಗಳನ್ನಂತೂ ನೋಡಲೇನೆ ಅಸಹ್ಯ ವಾಗುತ್ತದೆ. ಮೇಲೆ ಕೆಳಗೆ ನಾಲ್ಕು-ನಾಲ್ಕು ಇಂಚಿನ ಬಟ್ಟೆ ಬಿಟ್ಟರೆ ಇವರ ಮೈಮೇಲೆ ಮತ್ತೇನು ಇರುವುದಿಲ್ಲ. ಸಾಲದ್ದಕ್ಕೆ, 'ಹಿಂದೆ' ಹಾಗು ಎದೆಯ ಮೇಲೆ ಬಡಿದುಕೊಂಡು ಅಸಹ್ಯಕರ ಸಂಜ್ಞೆಗಳನ್ನೂ ಮಾಡುತ್ತಾರೆ. ಸಿನೆಮಾಗಳಲ್ಲಿ ಸುಳ್ಳು ಸುಳ್ಳೇ ರಕ್ತ ಹರಿಸಿದರೆ,ಹಿಂಸೆ ಜಾಸ್ತಿ ತೋರಿಸಿದರೆ,ಆಶ್ಲೀಲ ಅನಿಸುವಂತಿದ್ದರೆ 'A' ಸರ್ಟಿಫಿಕೆಟ್ ಕೊಡುತ್ತಾರೆ, ಅದಕ್ಕೊಂದು ಸೆನ್ಸಾರ್ ಮಂಡಳಿಯು ಇದೆ.ಆದರೆ ಈ ರಸ್ಟ್ಲಿಂಗ್ ಹಿಂಸೆಗೆ - ಅಸ್ಲೀಲಕ್ಕೆ ಕಡಿವಾಣ ಹಾಕುವವರು ಯಾರು?
ನಾವು,ನಮ್ಮ ಮಕ್ಕಳನ್ನು ಇಂಥ ಕಾರ್ಯಕ್ರಮಗಳನ್ನು ನೋಡದಂತೆ ತಡಿಯಬಹುದು.ಆದರೆ ಈಗಾಗಲೇ ಇದಕ್ಕೆ ಕೋಟ್ಯಾಂತರ ಮಕ್ಕಳು ಅಡಿಕ್ಟ್ ಆಗಿವೆ.ಮನೆಯಲ್ಲಿ ಬೇಡವೆಂದರೆ ಸ್ನೇಹಿತರ ಮನೆಗೆ ಹೋಗಿ ನೋಡುವಷ್ಟು ಅವು ಈ ಹಿಂಸೆ ಆಟಕ್ಕೆ ಅಂಟಿಕೊಂಡು ಬಿಟ್ಟಿವೆ. ಜಾನ್ ಸೇನಾ,ಬಟಿಸ್ಟಾ,ಅಂಡರ್ಟೇಕರ್,ಟ್ರಿಪಲ್ ಹೆಚ್,ಜೆಪ್ ಹಾರ್ಡಿ,ರೀಮಿಸ್ಟೀರಿಯೋ....ಮುಂತಾದ ರಸ್ತ್ಲರ್ ಗಳು ಇಂದು ನಮ್ಮ ಮಕ್ಕಳ ಹಿರೋಗಳಾಗಿದ್ದಾರೆ.ಮುಂದೆ ಇವರೇ ಆದರ್ಶವಾಗಿಬಿಟ್ಟರೆ ಬಿಟ್ಟರೆ ಹೇಗೆ?
ಟೆನ್ ಸ್ಪೋರ್ಟ್ಸ್ ನ ಡಬ್ಲ್ಯೂ.ಡಬ್ಲ್ಯೂ.ಇ, ಹಾಗೂ ಸ್ಟಾರ್ ಸ್ಪೋರ್ಟ್ಸ್ ನ ಟಿ.ಏನ್.ಎ. ಇವೆರಡು ಕಾರ್ಯಕ್ರಮಗಳಲ್ಲಿ ಎರಡು ವಿಭಾಗಗಳಿರುತ್ತವೆ,ಒಂದು ಕೆಟ್ಟವರದು, ಇನ್ನೊಂದು ಒಳ್ಳೆಯವರದು. ಒಳ್ಳೆಯವರು ನ್ಯಾಯವಾಗಿ ಪಂದ್ಯ ಗೆಲ್ಲಲು ನೋಡಿದರೆ,ಕೆಟ್ಟವರು ಅನ್ಯಾಯದಿಂದ ,ಮೋಸದಿಂದ ಗೆಲ್ಲಲು ಪ್ರಯತ್ನಿಸುತ್ತಾರೆ. ಕೈಗೆ ಸಿಕ್ಕ ವಸ್ತುವಿನಿಂದ ಹೊಡೆದು ವೈರಿಯನ್ನು ಕೆಡವುತ್ತಾರೆ.ಕಬ್ಬಿಣದ ರಾಡು,ಚೈನು,ಛೇರು,ಸ್ಟಿಕ್,ಟೇಬಲ್,ಬ್ಯಾರಲ್,ಮೈಕ್,ಚಿಕ್ಕ ಟಿ.ವಿ, ಸುತ್ತಿಗೆ ,ಮುಳ್ಳಿನ ತಂತಿ ಸುತ್ತಿದ ಲಾಠಿ ,ಗಾಜಿನ ಚೂರುಗಳು, ಚಪ್ಪಲಿಗೆ ಬಡಿಯುವ ಚಿಕ್ಕ ಮೊಳೆಗಳು,ಬಿಯರ್ ಬಾಟಲ್....ಹೀಗೆ ಹರಿತವಾದ -ಗಟ್ಟಿಯಾದ ವಸ್ತುಗಳಿಂದ ಹೊಡೆದು ಎದುರಾಳಿಯನ್ನು ರಕ್ತಸಿಕ್ತ ಗೊಳಿಸುತ್ತಾರೆ. ಇದನ್ನು ನೋಡುವ ಮಕ್ಕಳು ಕುಳಿತಲ್ಲೇ ಕೇಕೇ ಹಾಕಿ ಕೈ ಕೈ ಹಿಸುಕಿ ಕೊಳ್ಳುತ್ತಾರೆ. ಈ ಮಕ್ಕಳು ನಾಳೆ ತಮ್ಮ ಸಹಪಾಠಿ ಜೊತೆ ಜಗಳ ತಗೆದು ಹೀಗೆ ಕೈಗೆ ಸಿಕ್ಕ ವಸ್ತುವಿನಿಂದ ಹೊಡೆಯುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ?
ದ್ವೇಷ,ಸೇಡು,ಸಿಟ್ಟು,ಹಿಂಸೆ,ರಕ್ತ..
ಬೆಳಿಗ್ಗೆ ಏಳು ವರೆಗೆ,ಸಂಜೆ ನಾಲ್ಕು ವರೆಗೆ,ರಾತ್ರಿ ಒಂಭತ್ತು ವರೆಗೆ ಹೀಗೆ ದಿನದ ಮೂರೂ ಹೊತ್ತು ಅಲ್ಲದೆ,ಮದ್ಯ ಮದ್ಯ ಬಿಡುವು ಸಿಕ್ಕಾಗಲೆಲ್ಲ ಈ ರಕ್ತದಾಟವನ್ನು ಪ್ರಸಾರ ಮಾಡಲು ಇವೆರಡು ಛಾನಲ್ಗಳು ಪೈಪೋಟಿಗೆ ಇಳಿದಿವೆ,ರಸ್ಟ್ಲಿಂಗ ಕ್ರೀಡೆಯ ಹೆಸರಲ್ಲಿ ಬಕೆಟ್ ಗಟ್ಟಲೆ ರಕ್ತ ಹರಿಸುತ್ತವೆ.ರಕ್ತ ಹೆಚ್ಚು ಹರಿಸಿದಷ್ಟು ಟಿ.ಆರ್.ಪಿ.ಹೆಚ್ಚುತ್ತದೆ ಎಂಬುದು ಈ ಚಾನಲ್ ಗಳಿಗೆ ಕನ್ಫಾರ್ಮ್ ಆಗಿ ಬಿಟ್ಟಿದೆ. ಈ ಕಾರ್ಯಕ್ರಮಗಳನ್ನು ಮಕ್ಕಳಲ್ಲ,ದೊಡ್ಡವರು ನೋಡಿದರೂ ಮೂರ್ಛೆ ಹೋಗುವಂತಿರುತ್ತದೆ. ಮಹಿಳಾ ರಸ್ತ್ಲರ್ ಗಳನ್ನಂತೂ ನೋಡಲೇನೆ ಅಸಹ್ಯ ವಾಗುತ್ತದೆ. ಮೇಲೆ ಕೆಳಗೆ ನಾಲ್ಕು-ನಾಲ್ಕು ಇಂಚಿನ ಬಟ್ಟೆ ಬಿಟ್ಟರೆ ಇವರ ಮೈಮೇಲೆ ಮತ್ತೇನು ಇರುವುದಿಲ್ಲ. ಸಾಲದ್ದಕ್ಕೆ, 'ಹಿಂದೆ' ಹಾಗು ಎದೆಯ ಮೇಲೆ ಬಡಿದುಕೊಂಡು ಅಸಹ್ಯಕರ ಸಂಜ್ಞೆಗಳನ್ನೂ ಮಾಡುತ್ತಾರೆ. ಸಿನೆಮಾಗಳಲ್ಲಿ ಸುಳ್ಳು ಸುಳ್ಳೇ ರಕ್ತ ಹರಿಸಿದರೆ,ಹಿಂಸೆ ಜಾಸ್ತಿ ತೋರಿಸಿದರೆ,ಆಶ್ಲೀಲ ಅನಿಸುವಂತಿದ್ದರೆ 'A' ಸರ್ಟಿಫಿಕೆಟ್ ಕೊಡುತ್ತಾರೆ, ಅದಕ್ಕೊಂದು ಸೆನ್ಸಾರ್ ಮಂಡಳಿಯು ಇದೆ.ಆದರೆ ಈ ರಸ್ಟ್ಲಿಂಗ್ ಹಿಂಸೆಗೆ - ಅಸ್ಲೀಲಕ್ಕೆ ಕಡಿವಾಣ ಹಾಕುವವರು ಯಾರು?
ನಾವು,ನಮ್ಮ ಮಕ್ಕಳನ್ನು ಇಂಥ ಕಾರ್ಯಕ್ರಮಗಳನ್ನು ನೋಡದಂತೆ ತಡಿಯಬಹುದು.ಆದರೆ ಈಗಾಗಲೇ ಇದಕ್ಕೆ ಕೋಟ್ಯಾಂತರ ಮಕ್ಕಳು ಅಡಿಕ್ಟ್ ಆಗಿವೆ.ಮನೆಯಲ್ಲಿ ಬೇಡವೆಂದರೆ ಸ್ನೇಹಿತರ ಮನೆಗೆ ಹೋಗಿ ನೋಡುವಷ್ಟು ಅವು ಈ ಹಿಂಸೆ ಆಟಕ್ಕೆ ಅಂಟಿಕೊಂಡು ಬಿಟ್ಟಿವೆ. ಜಾನ್ ಸೇನಾ,ಬಟಿಸ್ಟಾ,ಅಂಡರ್ಟೇಕರ್,ಟ್ರಿ
ಟೆನ್ ಸ್ಪೋರ್ಟ್ಸ್ ನ ಡಬ್ಲ್ಯೂ.ಡಬ್ಲ್ಯೂ.ಇ, ಹಾಗೂ ಸ್ಟಾರ್ ಸ್ಪೋರ್ಟ್ಸ್ ನ ಟಿ.ಏನ್.ಎ. ಇವೆರಡು ಕಾರ್ಯಕ್ರಮಗಳಲ್ಲಿ ಎರಡು ವಿಭಾಗಗಳಿರುತ್ತವೆ,ಒಂದು ಕೆಟ್ಟವರದು, ಇನ್ನೊಂದು ಒಳ್ಳೆಯವರದು. ಒಳ್ಳೆಯವರು ನ್ಯಾಯವಾಗಿ ಪಂದ್ಯ ಗೆಲ್ಲಲು ನೋಡಿದರೆ,ಕೆಟ್ಟವರು ಅನ್ಯಾಯದಿಂದ ,ಮೋಸದಿಂದ ಗೆಲ್ಲಲು ಪ್ರಯತ್ನಿಸುತ್ತಾರೆ. ಕೈಗೆ ಸಿಕ್ಕ ವಸ್ತುವಿನಿಂದ ಹೊಡೆದು ವೈರಿಯನ್ನು ಕೆಡವುತ್ತಾರೆ.ಕಬ್ಬಿಣದ ರಾಡು,ಚೈನು,ಛೇರು,ಸ್ಟಿಕ್,ಟೇಬಲ್,ಬ್

No comments:
Post a Comment